Click a flower - in remembrance of

Sri KB Sadananda (2020)

The list of participants and the submitted photographs of this event are documented in this page.

Sri KB Sadananda



In case you cannot read the Kannada font below, read it in Kannada here.

ದಿವಂಗತ ಕೆ.ಬಿ. ಸದಾನಂದರ ೭೮ನೇ ಜನ್ಮದಿನದ (೩೦ನೇ ಅಕ್ಟೋಬರ್)‌ ನೆನಪಿನಲ್ಲಿ ಅವರೊಡನೆ ಒಡನಾಟವಿದ್ದವರು - ಹೂವಿನ ಚಿತ್ರ ಕ್ಲಿಕ್ಕಿಸಿ‌ - ಕಾರ್ಯಕ್ರಮವನ್ನೇರ್ಪಡಿಸಿದ್ದಾರೆ.

ಮೈಸೂರು ಮತ್ತು ಪಶ್ಚಿಮ ಘಟ್ಟ ಪ್ರದೇಶದ ಸಸ್ಯಾದಿ, ಪ್ರಾಣಿ ಪಕ್ಷಿಗಳನ್ನು ಆಳವಾಗಿ ಅಭ್ಯಸಿಸಿ, ಸಂಪಾದಿಸಿದ ಜ್ಞಾನವನ್ನು ಮುಂದಿನ ತಲೆಮಾರಿಗೆ ನಿರಪೇಕ್ಷೆಯಿಂದ ಸಂಹವನ ಮಾಡುತ್ತಿದ್ದ ಸರಳ ಜೀವಿ ಇವರು. ಪರಿಸರದ ವಿಷಯವನ್ನು ಮಕ್ಕಳಾದಿಯಾಗಿ ಡಾಕ್ಟರೇಟ್ ಗಾಗಿ ಓದುತ್ತಿರುವವರಿಗೂ ಸುಲಲಿತವಾಗಿ ಮನದಟ್ಟು ಮಾಡಿಕೊಡುತ್ತಿದ್ದರು. ಇದಕ್ಕಿಂತ ಹೆಚ್ಚಾಗಿ ಲಿಂಗ, ಜಾತಿ, ಧರ್ಮ, ಭಾಷೆ ಮತ್ತು ಪ್ರದೇಶವನ್ನು ಮೀರಿ ಬದುಕಿ ಬಾಳಿದವರು. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿದ್ದರು. ಕಾರ್ಯಕ್ರಮದ ವಿವರಣೆ ಹೀಗಿದೆ:

  1. ಹೂವಿನ ಚಿತ್ರವನ್ನು ಸೆರೆ ಹಿಡಿಯಿರಿ, ಗುರುತು ಹಿಡಿಯಲು ಸಾಧ್ಯವಿರುವ ರೀತಿ. ಹೂವು, ಎಲೆಯ ಜೋಡಣೆ ಮತ್ತು ಕಾಯಿ-ಹಣ್ಣು(ಬಿಟ್ಟಿದ್ದರೆ)ಗಳಿದ್ದರೆ ನಿಖರವಾಗಿ ಗುರುತಿಸಲು ಸಾಧ್ಯ. ತೆಗೆದ ಚಿತ್ರವನ್ನು www.facebook.com/groups/mysorenature ನಲ್ಲಿ ಪ್ರಕಟಿಸಿ. ಸದಸ್ಯರಲ್ಲದಿದ್ದರೆ adavanne@gmail.com ಗೆ ಮೇಲ್‌ ಮಾಡಿ. ಬೇರೆ ಬೇರೆ ಹೂಗಿಡಗಳನ್ನು ಪ್ರತ್ಯೇಕವಾಗಿ ಕಳುಹಿಸಿ.

  2. ಮೂರು ದಿನಗಳ ಅವಧಿ - ದಿನಾಂಕ ೩೦/೧೦/೨೦೨೦ ರಿಂದ ೧/೧೧/೨೦೨೦ ರೊಳಗೆ ‘ಕರ್ನಾಟಕದಲ್ಲಿʼ ಸೆರೆ ಹಿಡಿದ ಹೂವಿನ ಚಿತ್ರಗಳನ್ನು ಮಾತ್ರ 0೨/೧೧/೨೦೨೦ ರ ಮಧ್ಯರಾತ್ರಿಯೊಳಗೆ ಕಳುಹಿಸಲು ಕೋರಲಾಗಿದೆ.

  3. ನಿಮ್ಮ ಹೆಸರು, ಹೂವಿನ ಹೆಸರು (ತಿಳಿದಿದ್ದರೆ), ಹೂವಿನ ಚಿತ್ರವನ್ನು ಸೆರೆ ಹಿಡಿದ ಪ್ರದೇಶದ ಹೆಸರು (ಉದಾಹರಣೆಗೆ - ಕಬ್ಬನ್‌ ಪಾರ್ಕ್‌, ಬೆಂಗಳೂರು/ ಕುಕ್ಕರಹಳ್ಳಿ, ಮೈಸೂರು)– ತಿಳಿಸಲು ಮರೆಯದಿರಿ.

  4. ಯಾರು ಮೇಲೆ ಕಾಣಿಸಿದ ಅವಧಿಯಲ್ಲಿ - ಅ) ಹೆಚ್ಚಿನ ಪ್ರಬೇಧದ ಹೂವರಳಿದ ಗಿಡ ಮರಗಳನ್ನು ಸೆರೆ ಹಿಡಿಯುತ್ತಾರೋ ಮತ್ತು ಆ) ಹೆಚ್ಚಿನ ಪ್ರಬೇಧದ ಹೂವರಳಿದ ಅಪರೂಪದ/ ಅಳಿವನಂಚಿನಲ್ಲಿರುವ/ಸ್ಥಳೀಯ ಗಿಡ ಮರಗಳನ್ನು ಸೆರೆ ಹಿಡಿಯುತ್ತಾರೋ ಅವರುಗಳಿಗೆ ಪುಸ್ತಕದ ರೂಪದಲ್ಲಿ ಉಡುಗೊರೆ ನೀಡಲಾಗುವುದು. ನೀವು ಕಳುಹಿಸಿದ ಚಿತ್ರಗಳನ್ನು ನಾವೇ ವಿಂಗಡಿಸಿಕೊಳ್ಳುತ್ತೇವೆ.

  5. ಸಸ್ಯಶಾಸ್ತ್ರದಲ್ಲಿ ಹೆಚ್ಚಿನ ಪರಿಣತಿ ಇರುವ ಡಾ. ಎ.ಎನ್. ಶೃಂಗೇಶ್ವರ ಮತ್ತು ಡಾ. ಕೆ.ಕೆ. ಸಂಪತ್ಕುಮಾರ ಅವರು ಹೂವುಗಳ ಹೆಸರನ್ನು ತಿಳಿಸಿಕೊಡುವುದಲ್ಲದೆ, ವಿಜೇತರನ್ನು ಆಯ್ಕೆ ಮಾಡಿಕೊಡಲಿದ್ದಾರೆ.

  6. ಕಾರ್ಯಕ್ರಮಕ್ಕೆ ಬಂದ ಚಿತ್ರಗಳ ಸಂಗ್ರಹವನ್ನು www.mysorenature.org ನಲ್ಲಿ ಎಲ್ಲರಿಗೂ ಲಭ್ಯವಿರುವಂತೆ ಪ್ರಕಟಿಸಿಲಾಗುವುದು.

ಇದೊಂದು ಕಲಿಕೆಯ ಕಾರ್ಯಕ್ರಮ. ಗಿಡಮರಗಳ ಬಗೆಗೆ ತಿಳುವಳಿಕೆಯಿಲ್ಲದವರೂ ಭಾಗವಹಿಸಬಹುದು. ನಿಮ್ಮ ಸ್ನೇಹಿತರು/ ಮಕ್ಕಳು ಭಾಗವಹಿಸಲು ಪ್ರೋತ್ಸಾಹಿಸಿ. ಮೊಬೈಲ್‌ನಲ್ಲಿ ಸಹ ಹೂವನ್ನು ಸೆರೆಹಿಡಿಯ ಬಹುದು. ಆಸಕ್ತರು ಸದುಪಯೋಗ ಪಡೆಯಲು ಕೋರಲಾಗಿದೆ. ಹೆಚ್ಚಿನ ವಿವರ/ಅನುಮಾನ ಪರಿಹಾರಕ್ಕೆ ಸಂಪರ್ಕಿಸಿ adavanne@gmail.com

An event- CLICK A FLOWER, is arranged in memory of late Sri KB Sadananda on his 78th birthday (30th October), a naturalist who inspired many academicians and naturalists in Mysore. Moreover, he was a great human beyond gender, caste, religion, region and language. He used to share his immense knowledge of plants and animals acquired, right from a child to a doctoral student. Those who were in contact with him have organized this event.

  1. Click a flower in bloom and post it in www.facebook.com/groups/mysorenature. If not a member, please mail it to adavanne@gmail.com

  2. Ensure the photo clarity is good enough to identify the plant. One post for each species, it could contain 2-3 phots showing flowers, leaf arrangement and fruits (if any) of same flowering plant for better identification. Participant can post any number of flowering plant photos.

  3. Photos clicked anywhere in Karnataka and ONLY during- 30/10/2020 till 01/11/2020 are eligible for participation. Post it before 02/11/2020, midnight.

  4. Whoever post a) maximum number of Flowering photos and b) maximum number of Rare/endangered/endemic flowering photos -during the course of three days will get a book as prize. Keep posting, we will list out categorically.

  5. Please mention your name, plant ID (if known otherwise unknown), location of flowering plant photographed (say Cubbon Park, Bangalore or Kukkarahalli, Mysore or so)

  6. Eminent field biologists’ Dr AN Sringeswara & Dr KK Sampathkumara will be identifying the flowering plants posted and select the winners.

  7. Making use of this event a photo album will be prepared (you being author) and available for everyone’s usage in www.mysorenature.org.

It’s a learning event and is open to one and all, even who don’t know anything about plants. Encourage your friends and specially children to participate. Even a mobile click is enough to get a good flower picture. Requested to make use of the program.

For clarification please contact: adavanne@gmail.com